ಹೊನ್ನಾವರ: ತಾಲೂಕಿನ ಟೊಂಕ ಕಾಸರಕೋಡ ಕಡಲಾಮೆ ಮೊಟ್ಟೆ ಇಡುವ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದ ಮೃತ ಆಲಿವ್ರೆಡ್ಡಿ ಹಾಗೂ ಗ್ರೀನ್ ಜಾತಿಯ ಎರಡು ಕಡಲಾಮೆಯ ಅಂತಿಮ ಸಂಸ್ಕಾರದಲ್ಲಿ ಹೊನ್ನಾವರ ಅರಣ್ಯ ವಲಯದ ಸಿಬ್ಬಂದಿಗಳಾದ ವಿನೋದ ನಾಯ್ಕ, ಶಿವಾನಂದ ನಾಯ್ಕ, ರೀಫ್ ವಾಕ್ ನ ರಾಮಚಂದ್ರ, ಕಾಸರಕೋಡ ಟೊಂಕ ಖಾರ್ವಿ ವಾಡೆಯ ಬುದವಂತರಾದ ರಾಜೇಶ ಗೋವಿಂದ ತಾಂಡೆಲ್, ದೇಶದ ನಾನಾ ರಾಜ್ಯದಿಂದ ಕಡಲತೀರ ಸಂದರ್ಶನ ಅಭ್ಯಾಸಕ್ಕೆ ಬಂದ ಬೆಂಗಳೂರಿನ ಅಜೀಮ್ ಪ್ರೇಮಜೀ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕಡಲ ವಿಜ್ಞಾನಿ ಪ್ರಕಾಶ್ ಮೇಸ್ತ ಹಾಗೂ ಮೀನುಗಾರರು ಇದ್ದರು.