ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕೆ ಬಂದು ಕಡಲಾಮೆಯ ಹೆಜ್ಜೆಗುರುತು, ಹಾಗೂ ಮೊಟ್ಟೆಗಳನ್ನ ಪರಿಶೀಲಿಸಿದರು. ಖ್ಯಾತ ಪರಿಸರ ಮತ್ತು ವೈಜ್ಞಾನಿಕ ಲೇಖಕ ನಾಗೇಶ ಹೆಗಡೆ, ಕಡಲ ವಿಜ್ಞಾನಿ ಡಾ. ಪ್ರಕಾಶ ಮೇಸ್ತ ಸ್ಥಳಕ್ಕೆ ಭೇಟಿ ನೀಡಿ ಕಡಲಾಮೆ ಮೊಟ್ಟೆ ಇಟ್ಟಿರುವ ಗೂಡನ್ನು ವೀಕ್ಷಿಸಿದರು. ಹೊನ್ನಾವರ ಫೌಂಡೇಶನ್‌ನ ಕಾರ್ಯಕರ್ತರು ಹಾಗೂ ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿಯ ರಮೇಶ ತಾಂಡೇಲ ಹಾಗು ಬಾಸ್ಕರ್ ತಾಂಡೇಲ ಸಂರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರು.
